ಡಿಸೆಂಬರ್ ೧೬ - ಡಿಸೆಂಬರ್ ತಿಂಗಳಿನ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೦ನೇ (ಅಧಿಕ ವರ್ಷದಲ್ಲಿ ೩೫೧ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೫೯೮ - ಇಮ್ಜಿನ್ ಯುದ್ಧದ ಕೊನೆಯ ಜಲಕಾಳಗದಲ್ಲಿ ಕೊರಿಯ ಜಪಾನ್ ಅನ್ನು ಸೋಲಿಸಿತು. ೧೭೭೩ - ಬಾಸ್ಟನ್ ಟೀ ಪಾರ್ಟಿ: ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಗೆ ಸೇರಿದ್ದ ಚಹ ಎಲೆಗಳನ್ನು ಹೊಂದಿದ್ದ ಅನೇಕ ಪೆಟ್ಟಿಗೆಗಳನ್ನು ಬಾಸ್ಟನ್ನಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಸಾಗರಕ್ಕೆ ಎಸೆದರು. ೧೯೨೨ - ಪೋಲೆಂಡ್ ಗಣರಾಜ್ಯದ ಮೊದಲ ರಾಷ್ಟ್ರಪತಿ ಗೇಬ್ರಿಯೆಲ್ ಗರುಟೊವಿಕ್ಜ್ ಹತ್ಯೆಗೊಂಡನು. ೧೯೭೧ - ೧೯೭೧ರ ಭಾರತ-ಪಾಕಿಸ್ತಾನ ಯುದ್ಧವು ಪಾಕಿಸ್ತಾನದ ಶರಣಾಗತಿಯಿಂದ ಮುಕ್ತಾಯವಾಯಿತು. ೧೯೯೧ - ಕಜಾಕಸ್ತಾನ್ ಸ್ವಾತಂತ್ರ್ಯ ಪಡೆಯಿತು. == ಜನನ == ೧೭೭೬ - ಯೋಹಾನ್ ವಿಲ್‌ಹೆಲ್ಮ್ ರಿಟರ್, ಜರ್ಮನಿಯ ರಸಾಯನ ವಿಜ್ಞಾನಿ ೧೮೬೩ - ಜಾರ್ಜ್ ಸಾಂಟಾಯಾನ, ಸ್ಪೇನ್ನ ತತ್ವಶಾಸ್ತ್ರಜ್ಞ. == ಮರಣ == ೧೯೬೫ - ಸೊಮರ್ಸೆಟ್ ಮೌಘಮ್, ಬ್ರಿಟನ್ನ ಸಾಹಿತಿ. == ದಿನಾಚರಣೆಗಳು == ಬಾಂಗ್ಲಾದೇಶ - ವಿಜಯ ದಿವಸ. ಬಹ್ರೈನ್ - ರಾಷ್ಟ್ರೀಯ ದಿನಾಚರಣೆ. ಕಜಾಕಸ್ತಾನ್ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ